Friday, August 28, 2009

ಗುರು

ಗುರುವೆಂದರಿಯೇ
ನೀ ಶಿಲ್ಫಿಯಲ್ಲವೇನು?
ವ್ಯರ್ಥ ಕಲ್ಲನು ತಂದು
ಸಮರ್ಥವಾಗಿ ಬಡಿದುಬಿಡು
ಉಳಿಯೇಟು ತಿಂದಷ್ಟು
ಕಲ್ಲಿಗೊಂದು ಆಕಾರ!
ನೀ ನೀಡಿದರೆ ಅದಕ್ಕೊಂದು ನುಡಿಯನು
ಅದು ಸಾರುವುದು ಶಿಲ್ಫಿಯ ಪರಿಯನು
ನೀನದರ ಸಾನಿಧ್ಯವ ಒಲ್ಲೆಯೇನೊ?
ಅದು ಮೌನದಲೂ ಕೃತಜ್ಞತೆಯ
ಸಾರುವುದಿಲ್ಲವೇನು?

Thursday, August 27, 2009

ನೀನಿರದೆ

ಮಂಜ ಮುಸುಕಂತೆ ಬರುವ ನಿನ್ನ ನೆನಪುಗಳೂ
ನೆರಳಂತೆ ಒಂದೇ ಸಮನೇ ಹಿಂಬಾಲಿಸುತ ಕಾಡುವ
ನಿನ್ನ ಒಡನಾಟ
ಅರ್ಥವಾಗದ ಮಾತುಗಳು
ತಿಳಿಯದ ಭವಿಷ್ಯ
ಇವೆಲ್ಲವ ತರ್ಕಕ್ಕೆ ಇರಿಸಿ ಕುಳಿತ ಮೌನ
ಕನಸ ಕದಡುತ ಹೊರಟ ಜೀವನ
ಎಷ್ಟು ದಿನ............?
ನರ ನರ ನಾಡಿಗಳಲಿ ಸೇರಿ ಹೋಗಿರುವ ನೀ
ನರನಾಡಿಗಳೆಲ್ಲ ಒಡೆದು
ಬರುವ ರಕ್ತದಂತೆಯಾದರೂ ನಿನ್ನ ನೆನಪುಗಳು ಮರೆಯಾಗಲಿ
ಗೆಳೆಯ ನೀ ಇಲ್ಲದೆ ನರಳುವುದು ನೆರಳು ಕೂಡ ಕಣ್ಮರೆಯಲಿ

Wednesday, August 26, 2009

ತಥಾಗತ

ದೇಹವನ್ನು ಮೀರಿದ ಶುದ್ಧ ಪ್ರೇಮ
ಸಕಲ ಭಾಗ್ಯವ ಮೀರಿದ ಸೌಭಾಗ್ಯ
ಕ್ಲೇಶವ ದೂಡಿದ ಪರಿಶುದ್ಧ
ನೋಟದೊಳಗೆ ನಿರ್ವಾಣದ ದೀಪ
ದೇಹಕ್ಕಿಂತ ಧರ್ಮ, ನಿರ್ವಾಣವೇ
ಮುಖ್ಯವೆಂದರಿತ ನೀ
ನಿಜವಾಗಿಯೂ ತಥಾಗತ!